ನವದೆಹಲಿ, ಅ 17 (MSP): ಅಸಂಖ್ಯಾತ ಬಳಕೆದಾರರನ್ನು ಹೊಂದಿರುವ ಯುಟ್ಯೂಬ್ ನ ವಿರುದ್ದ ಬಳಕೆದಾರರು ಟ್ವಿಟರ್ನಲ್ಲಿ ತಮ್ಮ ಅಸಮಾಧಾನವನ್ನು ತೋರ್ಪಡಿಸಿದ್ದಾರೆ. ಪದೇ ಪದೇ ಯುಟ್ಯೂಬ್ ನಲ್ಲಿ ವಿಡಿಯೊ ಪ್ರಸಾರವಾಗುವಾಗ ಅಡಚಣೆ ಉಂಟಾಗುತ್ತಿದ್ದು, ಇದರಿಂದ ತೀವ್ರ ಕಿರಿಕಿರಿಗೊಳಗಾದ ಬಳಕೆದಾರರು ಟ್ವಿಟರ್ನಲ್ಲಿ ಯುಟ್ಯೂಬ್ಡೌನ್ ಹ್ಯಾಷ್ಟ್ಯಾಗ್ನೊಂದಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಯುಟ್ಯೂಬ್ ಉಂಟಾಗಿರುವ ಸಮಸ್ಯೆಯನ್ನು ಬಳಕೆದಾರರು ಯುಟ್ಯೂಬ್ ಸಂಸ್ಥೆಯ ಗಮನ ತರುತ್ತಿದ್ದಂತೆ ಎಚ್ಚೆತ್ತುಕೊಂಡು, ಯುಟ್ಯೂಬ್ ಟಿವಿ ಮತ್ತು ಯುಟ್ಯೂಬ್ ಮ್ಯೂಸಿಕ್ನಲ್ಲಿ ಉಂಟಾಗಿರುವ ವ್ಯತ್ಯಯದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಇದನ್ನು ಬಗೆಹರಿಯಲು ತಕ್ಷಣ ಕ್ರಮತೆಗೆದುಕೊಂಡಿದ್ದೇವೆ ಮತ್ತು ಸಮಸ್ಯೆ ಸರಿಯಾದ ತಕ್ಷಣ ನಿಮ್ಮ ಗಮನಕ್ಕೆ ತರುತ್ತೇವೆ’ ಎಂದು ಗೂಗಲ್ನ ಭಾಗವಾಗಿರುವ ಯುಟ್ಯೂಬ್ ಟ್ವೀಟಿಸಿದೆ.
ಈ ವ್ಯತ್ಯಯದಿಂದ ಅಸಮಧಾನಗೊಂಡಿರುವ ಕೆಲವು ಬಳಕೆದಾರರು ಫೋಟೊ, ವೀಡಿಯೋ ಮೂಲಕ ಯುಟ್ಯೂಬ್ ಸಾಂಸ್ಥೆಯನ್ನು ಅಣಕಿಸಿ ಟ್ವೀಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಯುಟ್ಯೂಬ್ ಸಮಸ್ಯೆ ಪರಿಹರಿಸಿದೆ ಎಂದೂ ಟ್ವೀಟಿಸುತ್ತಿದ್ದಾರೆ. ಈ ನಡುವೆ ಟ್ವಿಟರ್ನಲ್ಲಿ ಯುಟ್ಯೂಬ್ಡೌನ್ ಟ್ರೆಂಡ್ ಆಗಿದೆ .ಇನ್ನು ಎಲ್ಲೆಲ್ಲಿ ಯುಟ್ಯೂಬ್ ಗೆ ವ್ಯತ್ಯಯ ಉಂಟಾಗಿದೆ ಎಂಬುದನ್ನು ತಿಳಿಸಿಲ್ಲ.