ಮಂಗಳೂರು, ಜು.26 (DaijiworldNews/HR): ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕರಾದ ಫಾದರ್ ಮ್ಯಾಥ್ಯು ವಾಸ್ ಅವರು ಇಂದು ಆಸ್ಪತ್ರೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಫಾದರ್ ಮ್ಯಾಥ್ಯು ವಾಸ್ ಅವರು ಅವರು ಆಸ್ಕರ್ ಫೆರ್ನಾಂಡಿಸ್ ಅವರ ಪತ್ನಿ ಶ್ರೀಮತಿ ಬ್ಲೋಂ ಫೆರ್ನಾಂಡಿಸ್ ಹಾಗೂ ಮಕ್ಕಳೊಡಗೆ ಆರೋಗ್ಯ ವಿಚಾರಿಸಿ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬಳಿಕ ಮಾತಾನಾಡಿದ ಅವರು, " ನಮ್ಮ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಅತೀ ಭೇಗ ಚೇತರಿಸಿಕೊಳ್ಳಲು ಭಾನುವಾರ ಬಲಿಪೂಜೆ ಸಂಧರ್ಭದಲ್ಲಿ ಎಲ್ಲಾ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದ್ದು, ನನ್ನ ಮತ್ತು ಅವರ ಒಡನಾಟ ಹಲವಾರು ವರ್ಷಗಳಿಂದ ಚೆನ್ನಾಗಿ ಇರುವುದರಿಂದ ನಾನು ಆಸ್ಕರ್ ಎಂದು ಕರೆಯುವಾಗ ಅವರು ಸ್ಪಂದಿಸಿದ್ದಾರೆ" ಎಂದರು.
ಇನ್ನು ಆಸ್ಕರ್ ಅವರು ಕಥೊಲಿಕ್ ಸಭೆಯ 1979 ರಿಂದ 1982ವರೆಗೆ ಸಾಪಕ ಅಧ್ಯಕರಾಗಿದ್ದು, ನಮ್ಮ ಸಂಘಟನೆಯ ಎಲ್ಲಾ ಕಾರ್ಯಕ್ರವುಕ್ಕೂ ಭಾಗವಹಿಸುತ್ತಿದ್ದರು ಎಂದಿದ್ದಾರೆ.
ಈ ವೇಳೆ ಕೇಂದ್ರಿಯ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ, ಫಾ.ಆಂಡ್ರಿಯೋ ಲಿಯೋ ಡಿ'ಸೋಜಾ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ಉಪಸ್ಥಿತರಿದ್ದರು.