ಮಂಗಳೂರು, ಜು 26 (DaijiworldNews/MS): ಮಂಗಳೂರು ವಿಶ್ವವಿದ್ಯಾಲಯ ಹಾಗೂ ದಕ್ಷಿಣ ಕನ್ನಡ ಉಡುಪಿ ಕೊಡಗು ವ್ಯಾಪ್ತಿಯ ಸಂಯೋಜಿತ ಒಟ್ಟು 207 ಪದವಿ ಕಾಲೇಜುಗಳು ಸೋಮವಾರದಿಂದ ಪುನರಾರಂಭಗೊಂಡಿದೆ.
ಕಾಲೇಜು ಪ್ರಾರಂಭವಾದರೂ ಬೌದ್ಧಿಕ ತರಗತಿಗಳು ನಡೆಯುತಿಲ್ಲ.ಪದವಿ ಪರೀಕ್ಷೆಗಳು ಬಾಕಿ ಇರುವ ಕಾರಣ ಭೌತಿಕ ತರಗತಿ ಜುಲೈ 26ರಿಂದ ಆರಂಭವಾಗುವುದಿಲ್ಲ. ಪದವಿ ಪರೀಕ್ಷೆ ಹಿನ್ನೆಲೆಯಲ್ಲಿ ಜುಲೈ 26ರಿಂದ ಅಗಸ್ಟ್ ನಾಲ್ಕರವರೆಗೆ ಪರೀಕ್ಷೆಯ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ .ಹೀಗಾಗಿ ಪರೀಕ್ಷೆ ಸಂಬಂಧಿಸಿದ ಯಾವುದಾದರೂ ಪ್ರಶ್ನೆ ಸಂಶಯ ಗಳಿದ್ದರೆ ಅದನ್ನು ನಿವಾರಿಸಲು ಅಧ್ಯಾಪಕರಿಂದ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮುಂದೂಡಲ್ಪಟ್ಟ 1,3,5 ಹಾಗೂ 7 ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳು ಆ.2 ರಿಂದ ಹಾಗೂ 3 ನೇ ಸೆಮಿಸ್ಟರ್ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಆ. 5 ರಿಂದ ನಡೆಯಲಿದೆ
ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ, ಪೀಠೋಪಕರಣ, ಇತ್ಯಾದಿ ಸ್ಯಾನಿಟೈಜ್ ಮಾಡಲಾಗಿದೆ.ಕಾಲೇಜಿಗೆ ಹಾಜರಾಗುವ ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರ ಸಿಬ್ಬಂದಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಪಡೆದಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ.