ಬ್ರಹ್ಮಾವರ, ಜು. 25 (DaijiworldNews/SM): ಏಕಾಏಕಿ ಬ್ರೇಕ್ ಹಾಕಿದ ಹಿನ್ನೆಲೆ ಗೂಡ್ಸ್ ಟೆಂಪೋವೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಕುಂದಾಪುರದಿಂದ ಉಡುಪಿ ಕಡೆಗೆ ಟೆಂಪೋ ಬರುತ್ತಿತ್ತು. ವಾಹನದ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಹಿನ್ನೆಲೆ ವಿಭಾಜಕಗಳನ್ನು ಏರಿ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ದ್ವಿಚಕ್ರ ವಾಹನ ಸವಾರ ಸಣ್ಣ ಗಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.