ಮಂಗಳೂರು, ಜು.24 (DaijiworldNews/HR): ದೈಜಿವರ್ಲ್ಡ್ ಮೀಡಿಯಾದಲ್ಲಿ ಉಪ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದ ಆಶಾ ಮರಿಯಾ ರೆಗೊ(49) ಜುಲೈ 22 ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಜೂನ್ 6, 1972 ರಂದು ಜನಿಸಿದ ಆಶಾ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.
2014 ರ ಡಿಸೆಂಬರ್ನಲ್ಲಿ ದೈಜಿವರ್ಲ್ಡ್ಗೆ ಸೇರುವ ಮೊದಲು, ಆಶಾ ಲಂಡನ್ನ ಟ್ರಿನಿಟಿ ಕಾಲೇಜಿನ ಫ್ರ್ಯಾಂಚೈಸ್ನ ಕೆನರಾ ಸ್ಕೂಲ್ ಸಿಬಿಎಸ್ಇಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಮತ್ತು ಎಮ್ಐಟಿ, ಮೂಡುಬಿದ್ರೆ ಮತ್ತು ಇತರ ಹಲವಾರು ಸಂಸ್ಥೆಗಳಲ್ಲಿಯೂ ಕಾರ್ಯನಿರ್ವಾಹಿಸಿದ್ದಾರೆ.
ದೈಜಿವರ್ಲ್ಡ್.ಕಾಮ್ನ ಒಂದು ಪ್ರಮುಖ ಭಾಗವಾಗಿದ್ದ ಆಶಾ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರು.
ಅವರ ಅಕಾಲಿಕ ನಿಧನವು ಕುಟುಂಬ, ಸಹೋದ್ಯೋಗಿಗಳಿಗೆ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಆಘಾತವನ್ನುಂಟು ಮಾಡಿದೆ.
ಆಶಾ ಪತಿ ಮತ್ತು ಮಗನನ್ನು ಅಗಲಿದ್ದಾರೆ.
ಇನ್ನು ಜುಲೈ 25 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಉರ್ವಾದ ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.