ಬ್ರಹ್ಮಾವರ, ಜು.24 (DaijiworldNews/HR): ಜುಲೈ 23 ರಂದು ರಾತ್ರಿ ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ನ ಕಚೇರಿಗೆ ಕಳ್ಳನೊಬ್ಬ ನುಗ್ಗಿ 88,000 ರೂ.ಕದ್ದು ಪರಾರಿಯಾದ ಘಟನೆ ನಡೆದಿದ್ದು, ಜುಲೈ 24ರ ಶನಿವಾರ ಬೆಳಕಿಗೆ ಬಂದಿದೆ.
ಕಳ್ಳನು ಕಚೇರಿಯ ಕಿಟಕಿಯನ್ನು ಮುರಿದು ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಚಿತ್ರಗಳು ಹೆಚ್ಚು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಬಂದು ತಪಾಸಣೆ ನಡೆಸುತ್ತಿದ್ದು, ಚರ್ಚ್ ಬಳಿ ಇರುವ ಮನೆಯಿಂದ ಕೂಡ ಅಪರಿಚಿತರು ಬೈಕ್ ಕದ್ದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.