ಬಂಟ್ವಾಳ, ಅ 16 (MSP): ಎರಡೇ ವಾರದಲ್ಲಿ ಒಂದೇ ಕುಟುಂಬದ ನಾಲ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜಿಪನಾಡು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಮಯ್ಯದ್ದಿ ಅಕ್ಟೋಬರ್ 1 ರಂದು ಜ್ವರ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರ ಪತ್ನಿ ಅವ್ವಮ್ಮ ಅವರು ಎಚ್1 ಎನ್ 1 ಭಾಧಿತರಾಗಿ ಅ.10 ರಂದು ಮೃತಪತ್ಟಿದ್ದಾರೆ. ಇನ್ನು ಮಯ್ಯದ್ದಿ-ಅವ್ವಮ್ಮ ದಂಪತಿ ಪುತ್ರಿ ಝಬೀನಾ ಹೆರಿಗೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಮಗುವಿಗೆ ಜನ್ಮ ನೀಡಿದ್ದು, ಆರು ದಿನಗಳಲ್ಲಿ ಅಂದರೆ ಅ.4 ರಂದು ಆ ಮಗುವು ಮೃತಪಟ್ಟಿದೆ. ಇದೇ ವೇಳೆ ಝಬೀನಾ ಅವರೂ ಜ್ವರ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರೂ ಎಚ್1 ಎನ್ 1 ಜ್ವರಪೀಡಿತರಾಗಿ ಮಂಗಳವಾರ ನಸುಕಿನ ಜಾವ ಇಹಲೋಕ ತ್ಯಜಿಸಿದ್ದಾರೆ.
ಮೃತಪಟ್ಟವರಲ್ಲಿ ಇಬ್ಬರಿಗೆ ಎಚ್1 ಎನ್ 1 ಬಂದಿರುವುದು ದೃಢಪಟ್ಟಿದ್ದು, ಒಟ್ಟು ಒಂದೇ ಕುಟುಂಬದ ನಾಲ್ವರು ಸಾವನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ತಂದೊಡ್ಡಿದೆ.