ಮಂಗಳೂರು, ಜು 23 (DaijiworldNews/MS): ಯೋಗಭ್ಯಾಸದ ಸಂದರ್ಭ ಬಿದ್ದು ತಲೆಗೆ ಏಟಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರು ಸಂಪೂರ್ಣವಾಗಿ ಶ್ರೀಘ್ರ ಗುಣಮುಖರಾಗಬೇಕಾಗಿ ಬರಬೇಕೆಂದು ಕಾಟಿಪಳ್ಳದ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರದಂದು ಕಾಂಗ್ರೆಸ್ ನ ಮಾಜಿ ಶಾಸಕ ಅಭಯಚಂದ್ರ ಜೈನ್ ಹಾಗೂ ಯುವಕಾಂಗ್ರೆಸ್ ನ ಮಿಥುನ್ ರೈ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರನ್ನು ದೇವಳದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಎಸ್ ಡಿ ಸಿ ಸಿ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಲೇರಿಯನ್ ಸಿಕ್ವೇರಾ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಪ್ರವೀಣ್ ಬೊಳ್ಳೂರು, ವಸಂತ್ ಬೆರ್ನಾರ್ಡ್, ವೇಣುವಿನೋದ್ ಶೆಟ್ಟಿ, ರಮೇಶ್ ಪೂಜಾರಿ, ರಘು ಎಕ್ಕಾರು, ವಿನೀತ್ ಶೆಟ್ಟಿ ಎಕ್ಕಾರು, ಡೋನಿ ಸುವಾರಿಸ್, ಪೆರ್ಮುದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ,
ಕಿರಣ್ ಶೆಟ್ಟಿ ಚೇಳೈರು, ಸುಬ್ರಹ್ಮಣ್ಯ ಭಟ್ ಸೂರಿಂಜೆ, ಕಿಶೋರ್ ಕುಮಾರ್, ರೂಪೇಶ್ ರೈ, ಅಬ್ದುಲ್ ರಝಾಕ್ ಸೂರಿಂಜೆ, ಹಸನಬ್ಬ ಮಂಗಳಪೇಟೆ, ಅರುಣ್ ಚೌಟ ತೋಕೂರು, ಬಶೀರ್ ಅಹಮ್ಮದ್ ಜೋಕಟ್ಟೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರತಿಭಾ ಶೆಟ್ಟಿ ಎಕ್ಕಾರು, ದೀಪಕ್ ಪೆರ್ಮುದೆ ಮತ್ತಿತರು ಉಪಸ್ಥಿತರಿದ್ದರು.