ಉಳ್ಳಾಲ, ಜು.22 (DaijiworldNews/HR): ಧಾರಾಕಾರ ಮಳೆಗೆ ತೊಕ್ಕೊಟ್ಟು ಬಳಿಯ ಕುತ್ತಾರಿನ ಸಾಗರ್ ಬಾರ್ ರೆಸ್ಟೋರೆಂಟ್ನಲ್ಲಿ ಕಿಚನ್ ಮೇಲ್ಛಾವಣಿ ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದ್ದು ಒಳಗಿದ್ದ ಕಾರ್ಮಿಕರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆಯ ವಿಡಿಯೋ ವೈರಲ್ ಆಗಿದೆ.
ಕಳೆದ ಆದಿತ್ಯವಾರ ರಾತ್ರಿ ಘಟನೆ ನಡೆದಿದ್ದು, ಕಿಚನ್ ನಲ್ಲಿ ಕಾರ್ಮಿಕರು ಅಡುಗೆ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹಂಚಿನ ಮೇಲ್ಛಾವಣಿ ದರ್ರನೆ ಕುಸಿದು ಬಿದ್ದಿದೆ. ಒಳಗಿದ್ದ ಕಾರ್ಮಿಕರು ಪವಾಡ ಸದೃಶ ಪಾರಾಗಿದ್ದಾರೆ.
ಇನ್ನು ಬಾರಿನ ಸಿಸಿ ಕ್ಯಾಮೆರಾದಲ್ಲಿ ಘಟನೆಯ ವಿಡಿಯೋ ರೆಕಾರ್ಡ್ ಆಗಿದ್ದು ವೀಡಿಯೋ ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.