ಕುಂದಾಪುರ, ಅ 15(SM): ದನ ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಕೆರಿಕಟ್ಟೆ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಖಾಜಿ ಫಹಾದ್ (19) ಬಂಧಿತ ಆರೋಪಿ.
ನಾಲ್ಕು ಜನ ಆರೋಪಿಗಳ ತಂಡ ಬೈಂದೂರು ತಾಲೂಕಿನ ಶಿರೂರು ಕೆರಿಕಟ್ಟೆ ಎಂಬಲ್ಲಿ ದನ ಕಳ್ಳತನಕ್ಕೆ ಪ್ರಯತ್ನ ಮಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಬೈಂದೂರು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರನ್ನು ಕಂಡ ಆರೋಪಿಗಳ ತಂದದ ಪೈಕಿ ಮೂವರು ಪರಾರಿಯಾಗಿದ್ದಾರೆ. ಖಾಜಿ ಫಹಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಆರೋಪಿಗಳು ಬಳಸಿದ ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಯೀಮ್ ಕಂಡ್ಲೂರು, ಅಜೀಮ್ ಭಟ್ಕಳ, ಇಪ್ಜಾಲ್ ಭಟ್ಕಳ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಆರೋಪಿಗಳ ವಿರುದ್ಧ ಬೈಂದೂರು ಠಾಣೆಯಲ್ಲಿ ಕಲಂ 379,511 ರಂತೆ ಪ್ರಕರಣ ದಾಖಲಾಗಿದೆ.