ಕಾಸರಗೋಡು, ಜು 20 (DaijiworldNews/MS): ಯುವಕನನ್ನು ಅಪಹರಿಸಿ ನಗ ನಗದು ದರೋಡೆಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ನಾರಂಪಾಡಿ ಮುಹಮ್ಮದ್ ಆಸಿಫ್ (27) ಬಂಧಿತ ಆರೋಪಿ. 2021 ಜೂನ್ 22 ರಾತ್ರಿ ಕಾಸರಗೋಡು ನಗರ ಹೊರವಲಯದ ಸೂರ್ಲು ನಲ್ಲಿ ಚೌಕಿ ಆಜಾದ್ ನಗರದ ಅಹ್ಮದ್ ನಿಯಾಸ್ ಎಂಬಾತನ 12,000 ರೂ. ಎಟಿಎಂ ಕಾರ್ಡ್, ಪಾನ್ ಕಾರ್ಡ್ ಮೊದಲಾದವು ಗಳನ್ನು ದೋಚಿ ಬಳಿಕ ಆತನನ್ನು ಕಾರಿನಲ್ಲಿ ಅಪಹರಿಸಿ 9 ಗ್ರಾಂ ಚಿನ್ನದ ಒಡವೆ ಹಾಗೂ 15,000 ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಓರ್ವನನ್ನು ಈ ಹಿಂದೆಯೇ ಬಂಧಿಸಲಾಗಿದೆ. ಉಳಿದ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.