ಕಾರ್ಕಳ,ಅ 15 (MSP): ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಬೇಕಿದ್ದ 500 ಕೆಜಿ ಅಕ್ಕಿಯನ್ನು ಅಕ್ರಮವಾಗಿ ಬೇರೆಡೆಗೆ ಸಾಗಾಟ ಮಾಡುತ್ತಿದ್ದ ಅಟೋ ರಿಕ್ಷಾ ಸಮೇತ ಇಬ್ಬರನ್ನು ಇಲ್ಲಿನ ಪೊಲೀಸರು ಅ.15 ರ ಸೋಮವಾರ ವಶಪಡಿಸಿಕೊಂಡಿದ್ದಾರೆ.
ಜೋಡುಕಟ್ಟೆ ಯಿಂದ ಕಾರ್ಕಳ ನಗರಕ್ಕೆ ಸರಬರಾಜು ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಅಕ್ಕಿ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಜೋಡುಕಟ್ಟೆ ಜೀವಂದಾರ್ ಜೈನ್ ಗೆ ಸೇರಿದ ಸೊಸೈಟಿಯಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾರ್ಕಳ ರಥಬೀದಿಯಲ್ಲಿನ ದಿನಸಿ ವ್ಯಾಪಾರಸ್ತರಿಗೆ ಮಾರಾಟ ವಾಗುತ್ತಿತ್ತು ಎನ್ನಲಾಗಿದೆ.