ಕಾಸರಗೋಡು, ಜು.19 (DaijiworldNews/HR): ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಳಿಯತ್ತಡ್ಕ ಪಳ್ಳದ ಅಬ್ದುಲ್ ಅಝೀಜ್ (38), ಕೂಡ್ಲು ಕಾನಂತಿಗರೆಯ ಸುಬ್ಬ (58) ಮತ್ತು ಉಳಿಯತ್ತಡ್ಕದ ವಾಸುದೇವ ಗಟ್ಟಿ (50) ಎಂದು ಗುರುತಿಸಲಾಗಿದೆ.
ಐದು ಮಂದಿಯನ್ನು ಈ ಹಿಂದೆ ಬಂಧಿಸಲಾಗಿದ್ದು, ಉಳಿಯತ್ತಡ್ಕ ಪರಿಸರದ ಬಾಡಿಗೆ ಮನೆಯೊಂದರಲ್ಲಿ 16 ವರ್ಷದ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಎಂಟಕ್ಕೇರಿದೆ.
ಎರಡು ವರ್ಷಗಳಿಂದ ಬಾಲಕಿಗೆ ಆಮಿಷ ನೀಡಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ದೂರು ದಾಖಲಾಗಿತ್ತು.
ಚೈಲ್ಡ್ ಲೈನ್ ಅಧಿಕಾರಿಗೆ ಲಭಿಸಿದ ದೂರಿನಂತೆ ಬಾಲಕಿಯಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಕೃತ್ಯವನ್ನು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.