ಮಂಗಳೂರು, ಜು 19 (DaijiworldNews/MS): ನಗರದ ಉಳ್ಳಾಲದ ಬಳಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಜು.19 ರ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು ಶಿಕ್ಷಕರ ಸಮಯ ಪ್ರಜ್ಞೆಯಿಂದ ಮುಂದಾಗಲಿದ್ದ ಅನಾಹುತ ತಪ್ಪಿದೆ.
ಉಳ್ಳಾಲ ಸಮೀಪದ ಬಬ್ಬುಕಟ್ಟೆಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಲ್ಯಾಬ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ಲ್ಯಾಬ್ ಸಮೀಪವೇ ಇದ್ದಂತ ಎಸೆಸೆಲ್ಸಿ ಪರೀಕ್ಷಾ ಕೊಠಡಿಗೂ, ಪರೀಕ್ಷೆ ಆರಂಭವಾದಂತ ಅರ್ಧ ಗಂಟೆಯಲ್ಲಿ ದಟ್ಟವಾದ ಹೊಗೆ ಅವರಿಸಿಕೊಂಡಿದೆ. ಕೂಡಲೇ ಸ್ಥಳದಲ್ಲಿದ್ದಂತ ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಬೇರೊಂದು ಕಟ್ಟಡದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಮುಂದಾಗಲಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ನಿರಾಂತಕವಾಗಿ ಪರೀಕ್ಷೆ ಬರೆಯುವುದನ್ನು ಮುಂದುವರಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತ ಸ್ಥಳಕ್ಕೆ ಆಗಮಿಸಿದಂತ ಉಳ್ಳಾಲದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿ, ಹತೋಟಿಗೆ ತಂದಿದ್ದಾರೆ. ಈ ಅಗ್ನಿ ಅವಘಡ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದ ಉಂಟಾಗಿದೆ ಎಂದು ಹೇಳಲಾಗುತ್ತಿದೆ.