ಮಂಗಳೂರು, ಜು 19 (DaijiworldNews/PY): ಜಿಲ್ಲಾಧಿಕಾರಿಯ ಕಚೇರಿಯ ಲಿಫ್ಟ್ನಲ್ಲಿ ಮಹಿಳೆಯೋರ್ವರು ಸಿಲುಕಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಲಿಫ್ಟ್ ಜಾಮ್ ಆದ ಹಿನ್ನೆಲೆ ಕಚೇರಿಯ ಕೆಲಸದಾಳು ಮಹಿಳೆ ಸುಮಾರು 15 ನಿಮಿಷ ಲಿಫ್ಟ್ನೊಳಗೆ ಬಾಕಿಯಾಗಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯಂತ್ರ ಬಳಸಿ ಲಿಫ್ಟ್ನ ಬಾಗಿಲನ್ನು ಕತ್ತರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಇತ್ತೀಚೆಗೆ ನಗರದ ಮಿನಿ ವಿಧಾನಸೌಧದ ಲಿಫ್ಟ್ ಜಾಮ್ ಆಗಿ ಲಿಫ್ಟ್ನೊಳಗೆ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದರು.