ಮಂಗಳೂರು, ಜು.16 (DaijiworldNews/HR): ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಮಂಗಳೂರಿನಲ್ಲಿ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಪೂರೈಸಲು ಸೌಲಭ್ಯಗಳನ್ನು ನವೀಕರಿಸುತ್ತಿದ್ದು, ಇದೀಗ ಎ.ಜೆ. ಆಸ್ಪತ್ರೆಯು ಅತ್ಯಂತ ಆಧುನಿಕ 128 ಸ್ಲೈಸ್ ಡ್ಯುಯಲ್ ಎನರ್ಜಿ ಸಿಟಿ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಡಾ.ಎ.ಜೆ. ಶೆಟ್ಟಿಯವರ ಕನಸಾಗಿದ್ದು, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಯಾವಾಗಲೂ ಅತ್ತ್ಯುತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ರೋಗಿಗಳ ಆರೈಕೆ ಮತ್ತು ಅತ್ತ್ಯಾಧುನಿಕ ಸಲಕರಣೆಗಳನ್ನು ಒದಗಿಸುವಲ್ಲಿ ಇದು ಅನೇಕ ಪ್ರಥಮಗಳನ್ನು ಹೊಂದಿದ್ದು, ಇದೀಗ ಎ.ಜೆ. ಆಸ್ಪತ್ರೆಯು ಅತ್ಯಂತ ಆಧುನಿಕ 128 ಸ್ಲೈಸ್ ಡ್ಯುಯಲ್ ಎನರ್ಜಿ ಸಿಟಿ ಸ್ಕ್ಯಾನರ್ ಅನ್ನು ಅಳವಡಿಕೆ ಮಾಡಿದೆ.
ಈ ಯಂತ್ರವು ರೋಗಿಗಳ ಸ್ಥಾನವನ್ನು ಉತ್ತಮಗೊಳಿಸಲು ಮತ್ತು ತಂತ್ರಜ್ಞರಿಗೆ ಸ್ಕ್ಯಾನಿಂಗ್ ಸಹಾಯವನ್ನು ನೀಡಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ. ಆಂಬಿಯೆಂಟ್ ಮೋಡ್ ಲೈಟಿಂಗ್ ಮತ್ತು ಕಡಿಮೆ ಶಬ್ದವು ಸ್ಕ್ಯಾನ್ ನೊಂದಿಗೆ ರೋಗಿಗೆ ಸಕಾರಾತ್ಮಕ ಅನುಭವವನ್ನು ನೀಡುತ್ತದೆ. ಇಂಟರ್ ಕನೆಕ್ಟೆಡ್ ಟ್ಯಾಬ್ಲೆಟ್ ಆಧಾರಿತ ನಿಯಂತ್ರಣಗಳು ಸ್ಕ್ಯಾನ್ ಅನ್ನು ಅತ್ತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ, ದೋಷಗಳನ್ನು ತಪ್ಪಿಸುತ್ತದೆ ಮತ್ತು ವೇಗವಾಗಿ ಪ್ರಮಾಣೀಕೃತ ಫಲಿತಾಂಶಗಳನ್ನು ನೀಡುತ್ತದೆ.
ಇನ್ನು ಹೃದಯದ ಆಂಜಿಯೋಗಾಮ್ ಅನ್ನು ಕೇವಲ ಐ.ವಿ. ಚುಚ್ಚುಮದ್ದಿನೊಂದಿಗೆ ಒದಗಿಸಲು ಮತ್ತು ಕೆಲವೇ ಸೆಕೆಂಡುಗಳಲ್ಲಿ ಚಿತ್ರಗಳನ್ನು ಪಡೆದುಕೊಳ್ಳಲು ಈ ಯಂತ್ರವು ಸಮರ್ಥವಾಗಿದೆ. ಈ ಯಂತ್ರವು ಡ್ಯುಯಲ್ ಎನರ್ಜಿ ಸ್ಕ್ಯಾನಿಂಗ್ ಅನ್ನು ಹೊಂದಿದ್ದು, ಹೆಚ್ಚುವರಿ ಅಪ್ಲಿಕೇಶನ್ ಗಳ ಮೂಲಕ ಕಲ್ಲುಗಳ ವಿಶ್ಲೇಷಣೆ ಮತ್ತು ಇತರ ಸಂಶೋಧನಾ ವಿಶ್ಲೇಷಣೆಗಳಿಗೆ ಅನುವು ಮಾಡಿಕೊಡುತ್ತದೆ. ಈ ಯಂತ್ರವು ಅಲ್ಟ್ರಾ ಲೋ ಡೋಸ್ ಶ್ವಾಸಕೋಶದ ಸ್ಕ್ಯಾನ್ ಪ್ರೋಟೋಕಾಲ್ ಬಳಸಿ ಎದೆಯ ಸಿ.ಟಿ. ಮಾಡುವುದರಿಂದ ಕೋವಿಡ್
ಯುಗದಲ್ಲಿ ಶ್ವಾಸಕೋಶದ ಒಳಗೊಳ್ಳುವಿಕೆಯನ್ನು ನಿರ್ಣಯಿಸಲು ಸಹಕಾರಿಯಾಗಿದೆ.
128 ಸ್ಲೈಸ್ ಡ್ಯುಯಲ್ ಎನರ್ಜಿ ಸಿಟಿ ಸ್ಕ್ಯಾನರ್ ಕರ್ನಾಟಕದಲ್ಲಿ ಮೊದಲ ಮತ್ತು ಇಡೀ ದೇಶದಲ್ಲಿ ಲಭ್ಯವಿರುವ ಕೆಲವೇ ಘಟಕಗಳಲ್ಲಿ ಒಂದಾಗಿದ್ದು, 24x7 ಲಭ್ಯವಿರುವ ರೇಡಿಯೊ ಡಯಾಗ್ನೋಸಿಸ್ ವಿಭಾಗದಲ್ಲಿ ಈ ಅತ್ಯಾಧುನಿಕ ಯಂತ್ರವನ್ನು ಅಳವಡಿಸುವುದರೊಂದಿಗೆ ಎ.ಜೆ. ಆಸ್ಪತ್ರೆಯು ಅತ್ತ್ಯುನ್ನತ ರೋಗನಿರ್ಣಾಯಕ ಸಾಧನವನ್ನು ಸೇರಿಸಿದೆ.
128 ಸ್ಲೈಸ್ ಡ್ಯುಯಲ್ ಎನರ್ಜಿ ಸಿಟಿ ಸ್ಕ್ಯಾನರ್ ಅನ್ನು ಜುಲೈ 16ರಂದು ಅಧ್ಯಕ್ಷ ಡಾ ಎ ಜೆ ಶೆಟ್ಟಿ ಉದ್ಘಾಟಿಸಿದ್ದು, ನಿರ್ದೇಶಕ ಪ್ರಶಾಂತ್ ಶೆಟ್ಟಿ, ವೈದ್ಯಕೀಯ ನಿರ್ದೇಶಕ ಡಾ ಪ್ರಶಾಂತ್ ಮಾರ್ಲ, ಎ ಜೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ ಅಶೋಕ್ ಹೆಗ್ಡೆ, ಎ ಜೆ ಇನ್ಸಿಟ್ಯೂಟ್ ಆಫ಼್ ಡೆಂಟಲ್ ಸೈನ್ಸ ಸ್ ಪ್ರಾಂಶುಪಾಲ ಡಾ ನಿಲ್ಲನ್ ಶೆಟ್ಟಿ, ಅಧ್ಯಾಪಕರು ಮತ್ತು ಸಿಬ್ಬಂದಿ
ಉಪಸ್ಥಿತರಿದ್ದರು.