ಮಂಗಳೂರು, ಜು.16 (DaijiworldNews/HR): "ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ" ಡಿವಿಜಿ ಅವರ ಈ ಕಗ್ಗದ ಸಾಲು ನಗು ಹಾಗೂ ನಗಿಸುವವರ ಮಹತ್ವವನ್ನು ಸಾರುವುದಷ್ಟೇ ಅಲ್ಲ, ಹಾಸ್ಯವನ್ನೇ ಒಂದು ಧರ್ಮ ಎನ್ನುವ ಮೂಲಕ ಹಾಸ್ಯದ ಪ್ರಾಮುಖ್ಯತೆಯನ್ನು ಸಾರುತ್ತದೆ. ನಗುವುದು ಸುಲಭ ಆದರೆ ಎಲ್ಲರನ್ನು ನಗುವಂತೆ ಮಾಡುವುದು ಕಷ್ಟ. ಈ ಕಲೆ ನಿಮ್ಮಲ್ಲಿದ್ದರೆ ಕರಾವಳಿಯ ಮುಂಚೂಣಿ ಟಿವಿ ವಾಹಿನಿ "ದಾಯ್ಜಿವಲ್ಡ್" ನಿಮಗಾಗಿ ಸುವರ್ಣವಕಾಶವೊಂದನ್ನು ತೆರೆದಿಟ್ಟಿದೆ. ಅದೇ ಕಾಮಿಡಿ ರಾಜೆ/ ರಾಣಿ ಶೋ.!
ಕಾಮಿಡಿ ರಾಜೆ/ ರಾಣಿ ಶೋ ಸ್ಮರ್ಧಾತ್ಮಕ ಕಾರ್ಯಕ್ರಮವಾಗಿರಲಿದ್ದು, ಇದರಲ್ಲಿ ಭಾಗವಹಿಸಲು ತಂಡಕಟ್ಟಬೇಕಾದ ಚಿಂತೆಯಿಲ್ಲ. ಯಾಕೆಂದರೆ ಇದೊಂದು ತುಳು ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಆಗಿರಲಿದ್ದು ಏಕಪಾತ್ರದ ಮೂಲಕ ನೀವು ವೀಕ್ಷಕರಿಗೆ ಹಾಸ್ಯದ ರಸದೌತಣ ನೀಡಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ.!
ವೀಕ್ಷರನ್ನು ನಗಿಸುವಂತಹ ಪ್ರತಿಭೆ ನಿಮ್ಮಲ್ಲಿದ್ದರೆ ಸಾಕು, ತಡಮಾಡದೆ ದೈಜಿವರ್ಲ್ಡ್ ವಾಹಿನಿಯು ಪ್ರಸ್ತುತ ಪಡಿಸುತ್ತಿರುವ ಸ್ಟಾಂಡ್ ಅಪ್ ಕಾಮಿಡಿ ರಾಜೆ/ ರಾಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು. ಇದಕ್ಕಾಗಿ ನೀವು ಮೂರು ನಿಮಿಷದ ಸ್ಟಾಂಡ್ ಅಪ್ ಕಾಮಿಡಿಯ ವೀಡಿಯೋಂದನ್ನು ಮಾಡಿ 7022604567 ಈ ನಂಬರ್ಗೆ ಕಳುಹಿಸಿ.
ನಿಮ್ಮ ವಿಡಿಯೋ ನಮ್ಮ ತೀರ್ಪುಗಾರರಿಗೆ ಇಷ್ಟವಾದರೆ ದಾಯ್ಜಿವಲ್ಡ್ ಕಾಮಿಡಿ ರಾಜ/ ರಾಣಿ ಶೋ.! ಭಾಗವಹಿಸಿ ಬಹುಮಾನ ಗೆಲ್ಲುವ ಬಂಪರ್ ಅವಕಾಶ ನಿಮಗೊಲಿಯಲಿದೆ.
ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಕೊಮಿಡಿ ರಾಜೆ/ ರಾಣಿ ಬಿರುದಿನೊಂದಿಗೆ 50,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಕೊಮಿಡಿ ರಾಜೆ/ ರಾಣಿ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಚಿಸಿದವರು ಜುಲೈ 31ರ ಒಳಗಾಗಿ ಮೂರು ನಿಮಿಷದ ಸ್ಟಾಂಡ್ ಅಪ್ ಕಾಮಿಡಿಯನ್ನು ಮೇಲೆ ತಿಳಿಸಿದ ನಂಬರ್ ಗೆ ಕಳುಹಿಸಿಕೊಡಬೇಕು.