ಕಾಸರಗೋಡು, ಜು. 15(DaijiworldNews/HR): ಜಿಲ್ಲೆಯಲ್ಲಿ ಗುರುವಾರ 674 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 851 ಮಂದಿ ಗುಣಮುಖರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 5,703 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೆ 288 ಮಂದಿ ಮೃತಪಟ್ಟಿದ್ದು, 28,979 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 95,589 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 89,113 ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 5,381 ಮಂದಿಯ ತಪಾಸಣಾ ವರದಿ ಲಭಿಸಿದ್ದು, ಟೆಸ್ಟ್ ಪಾಸಿಟಿವ್ ರೇಟ್ 12.3 ಕ್ಕೆ ತಲಪಿದೆ.