ಮಂಗಳೂರು, ಜು. 15(DaijiworldNews/HR): ಪಂಪ್ವೆಲ್ ಮೇಲ್ಸೇತುವೆಯಿಂದ ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೇರಿದ ಕಾರೊಂದು ಸರ್ವಿಸ್ ರಸ್ತೆಗೆ ಜಾರಿದ ಘಟನೆ ಗುರುವಾರ ಸಂಜೆ ನಡೆದಿದೆ.
ಈ ಕಾರು ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಆಗಮಿಸುತ್ತಿದ್ದು, ಎದುರಿನಿಂದ ವೇಗವಾಗಿ ವಾಹನವೊಂದು ಬಂದಿದ್ದು ವಾಹನದ ವೇಗಕ್ಕೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ವೈದ್ಯರ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಚೆಲ್ಲಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಸರ್ವಿಸ್ ರಸ್ತೆಗೆ ಜಾರಿದೆ ಎಂದು ತಿಳಿದು ಬಂದಿದೆ.
ಇನ್ನು ಸರ್ವಿಸ್ ರಸ್ತೆಗೆ ಜಾರಿದ ಕಾರನ್ನು ಸ್ಥಳೀಯರು ಸಹಕಾರದೊಂದಿಗೆ ಪೊಲೀಸರು ಸಮತಟ್ಟಾದ ರಸ್ತೆಯಲ್ಲಿ ನಿಲ್ಲಿಸಿದರು.
ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.