ಮಂಗಳೂರು, ಜು. 15 (DaijiworldNews/HR): ಯುನಿಸೆಕ್ಸ್ ಸಲೂನ್ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ, ಹಲ್ಲೆ ಮತ್ತು ದರೋಡೆ ಮಾಡಿದ ಆರೋಪಿ ಅಬ್ದುಲ್ ದಾವೂದ್ ನಡೆಸಿದ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದು,ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕದ್ರಿಯ ಸಲೂನ್ನಲ್ಲಿ ಮಹಿಳೆಯೊಬ್ಬರಿಗೆ ಅಬ್ದುಲ್ ಕಿರುಕುಳ ಮತ್ತು ಹಲ್ಲೆ ನಡೆಸಿ 14,000 ರೂ. ಪಡೆದುಕೊಂಡಿದ್ದನು ಎನ್ನಲಾಗಿದೆ.
ಈ ಘಟನೆ ಜುಲೈ 1 ರಂದು ನಡೆದಿತ್ತು.
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆ.