ಕುಂದಾಪುರ, ಅ 13(SM): ಬಾವಿಯ ಕಟ್ಟೆಯ ಮೇಲೆ ಕುಳಿತು ಮೊಬೈಲ್ನಲ್ಲಿ ಆಟವಾಡುತ್ತಿದ್ದ ವೇಳೆ ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಕುಂದಾಪುರ ತಾಲೂಕಿನ ಬಸ್ರೂರು ಎಂಬಲ್ಲಿ ನಡೆದಿದೆ. ಮೃತರನ್ನು ಬಸ್ರೂರು ಸಮೀಪದ ಗುಂಡಿಗೋಳಿ ನಿವಾಸಿ ಶೀನ ಪೂಜಾರಿ ಪುತ್ರ ಭಾಸ್ಕರ್ ಪೂಜಾರಿ(21) ಎಂದು ಗುರುತಿಸಲಾಗಿದೆ.
ಭಾಸ್ಕರ್ ಪೂಜಾರಿ ಮೊಬೈಲ್ನಲ್ಲಿ ಆಟ ಆಡುವ ಚಟ ಹೊಂದಿದ್ದ ಎನ್ನಲಾಗಿದೆ. ಶುಕ್ರವಾರ ತಡ ರಾತ್ರಿ ಬಸ್ರೂರು ವೆಲ್ಡಿಂಗ್ ಶಾಪ್ ಪಕ್ಕದಲ್ಲಿರುವ ಬಾವಿಕಟ್ಟೆ ಮೇಲೆ ಕುಳಿತು ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.
ಘಟನೆಯ ಕುರಿತಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.