ಮಂಗಳೂರು,ಅ 9: ಅಮಿತ್ ಶಾ ಮಂಗಳೂರು ಭೇಟಿ ರದ್ದುಗೊಂಡಿರೋದರಿಂದ, ಬಿಜೆಪಿ ಪಕ್ಷದವರು ದ.ಕ ಜಿಲ್ಲೆಯಲ್ಲಿ ಧೈರ್ಯ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಬಿಜೆಪಿಯ ಪಕ್ಷದಲ್ಲಿ ಇರೋರು ರೌಡಿಗಳು ಅಲ್ಲಿ ಸಂಭಾವಿತರಿಗೆ ಅವಕಾಶ ಸಿಗೋದಿಲ್ಲ, ಈ ಪಕ್ಷ ಮತದಾನದ ಉದ್ದೇಶಕ್ಕಾಗಿಯೇ ಕೋಮು ಗಲಭೆಯನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಈ ಪಕ್ಷದಲ್ಲಿ , ಭಜರಂಗದಳದಲ್ಲಿ ಸಕ್ರಿಯರಾಗಿದ್ದು, ಹೆಚ್ಚು ಕೇಸ್ ಇದ್ದವರಿಗೆ ಅಧ್ಯಕ್ಷ ಸ್ಥಾನ, ಸ್ವಲ್ಪ ಕಡಿಮೆ ಇರುವವರಿಗೆ ಉಪಾಧ್ಯಕ್ಷ ಸ್ಥಾನ ಸಿಗುತ್ತೆ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ ಅವರು, ಶ್ರೀ ರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ನಗರ ಪ್ರದೇಶದಲ್ಲಿ ಗಾಂಜಾ ನಿಯಂತ್ರಣ ಹಾಗೂ ರೌಡಿ ನಿಗ್ರಹ ದಳ ಬಲಿಷ್ಠ ಮಾಡ್ತೀವಿ
ಎಂದು ಶ್ರೀ ರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆ ಪ್ರಸ್ತಾಪಿನಿ ಮಾತನಾಡಿದ ರೈ "ಅವನು ಯಾವನ್ ಅವ್ನು ಮುತಾಲಿಕ್,ಮುಸ್ಲಿಮರ ಜೊತೆ ವ್ಯಾಪಾರ ಸಂಬಂಧ ಕಡಿತಗೊಳಿಸುವ ಹೇಳಿಕೆಗಳನ್ನು ನೀಡುವ ಮುತಾಲಿಕ್ ಅವನೊಬ್ಬ ದಾರಿಹೋಕ ಸುಲಭದಲ್ಲಿ ನಾಯಕನಾಗಬೇಕು ಎಂದು ವೇದಿಕೆಯಲ್ಲಿ ಬೈದು ನಾಯಕರಾಗುತ್ತಾನೆ "ಎಂದು ಕಿಡಿಕಾರಿದರು. ಇನ್ನು ಸಿಎಂ ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಆಮ್ಲಜನಕ ಕೊರತೆಯಿಂದ ನೂರಾರು ಮಕ್ಕಳು ಸಾವನ್ನಪ್ಪಿದ್ದಾರೆ ಇಂಥಹ ಸ್ಥಿತಿ ಇರೋವಾಗ ಇಲ್ಲಿ ಬಂದು ಸಿಎಂ ಯೋಗಿ ಬೇರೆಯವರಿಗೆ ಬುದ್ದಿ ಹೇಳುತ್ತಾರೆ ಎಂದು ಕುಹಕವಾಡಿದರು. ಈ ಎಲ್ಲಾ ಕಾರಣಗಳಿಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸಾಮರಸ್ಯ ಕಾಪಾಡೋ ನಿಟ್ಟಿನಲ್ಲಿ ಜನ ಬೆಂಬಲ ಸಿಗುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮೇಯರ್ ಕವಿತಾ ಸನಿಲ್, ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಮಿಥುನ್ ರೈ, ಇಬ್ರಾಹಿಂ ಕೊಡಿಜಾಲ್, ಬಿ.ಎಚ್.ಖಾದರ್ ಮತ್ತಿತರರು ಉಪಸ್ಥಿತರಿದ್ದರು.