ಕಾಸರಗೋಡು, ಜು.11 (DaijiworldNews/HR): ಜಿಲ್ಲೆಯಲ್ಲಿ ಆದಿತ್ಯವಾರ 640 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 558 ಮಂದಿ ಗುಣಮುಖರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 5,495 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 28,340 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 93,627 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 87, 381 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 278 ಕ್ಕೆ ತಲಪಿದ್ದು, ಟೆಸ್ಟ್ ಪಾಸಿಟಿವ್ ರೇಟ್ 16.1ಕ್ಕೆ ತಲಪಿದೆ.