ಮಂಗಳೂರು, ಅ13: ಬಂಟ್ವಾಳ ತಾಲೂಕಿನ ಅರ್ಕುಳ ಗ್ರಾಮದ ವಳಚ್ಚಿಲ್ಪದವು ಕಾಲೇಜು ಸಮೀಪ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನೀರುಮಾರ್ಗ ನಿವಾಸಿ ಇಮ್ರಾನ್ (24), ಅರ್ಕುಳ ಗ್ರಾಮದ ವಳಚ್ಚಿಲ್ಪದವು ನಿವಾಸಿ ಇಮ್ತಿಯಾಝ್ ಅಹ್ಮದ್ (33) ಬಂಧಿತ ಆರೋಪಿಗಳು.
ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಜಾ ಆರೋಪಿಗಳಿಂದ 1 ಕೆ.ಜಿ., 350 ಗ್ರಾಂ ಗಾಂಜಾ, 1 ಎಫ್ಝೆಡ್ ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 15,396 ರೂ. ನಗದು ವಶಪಡಿಸಿಕೊಳ್ಳಲಾಗಿದೆ.