ಬೆಂಗಳೂರು, ಅ 12(SM): ರಾಜ್ಯ ಸರ್ಕಾರಿ ನೌಕರರಿಗೆ ಸಮ್ಮಿಶ್ರ ಸರಕಾರ ದಸರಾ ಉಡುಗೊರೆ ನೀಡಿದೆ. ನೌಕರರ ತುಟ್ಟಿ ಭತ್ಯೆ ಶೇ. 2 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ಸರ್ಕಾರಿ ನೌಕರರಿಗೆ ನಾಡಹಬ್ಬ ದಸರಾ ಗಿಫ್ಟ್ ನೀಡಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಆದೇಶ ಎಲ್ಲಾ ರಾಜ್ಯ ಸರಕಾರಿ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಅನ್ವಯವಾಗಲಿದೆ.
ಪ್ರಸ್ತುತ ಇರುವ ಶೇಕಡ 1.75 ರಷ್ಟು ತುಟ್ಟಿಭತ್ಯೆಯನ್ನು ಶೇ. 3.75 ಗೆ ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಜುಲೈ ಒಂದರಿಂದ ಅನ್ವಯವಾಗುವಂತೆ ಈ ಭತ್ಯೆ ಹೆಚ್ಚಳ ಆದೇಶ ಜಾರಿಗೆ ಬರಲಿದೆ.