ಉಡುಪಿ, ಜು 08 (DaijiworldNews/MS): ಕೇಂದ್ರ ಸಚಿವೆಯಾಗಿ ಬುಧವಾರ ಸಂಜೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ, ತಮ್ಮ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿದ್ದ ಈ ಹಿಂದಿನ ಎಲ್ಲಾ ಟ್ವೀಟ್ ಗಳನ್ನು ಅಳಿಸಿ ಹಾಕಿದ್ದಾರೆ.
ಸದ್ಯ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದ ಸಮಾರಂಭದ ಟ್ವೀಟ್ ಹೊರತುಪಡಿಸಿ ಉಳಿದ ಅವರ ಎಲ್ಲ ಸಂದೇಶಗಳನ್ನು ಡಿಲೀಟ್ ಮಾಡಿರುವುದು ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
2010ರಿಂದ ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ಶೋಭಾ ಕರಂದ್ಲಾಜೆ ಅವರು ಹಲವಾರು ರಾಜಕೀಯ ಬೆಳವಣಿಗೆಗಳ ಹಾಗೂ ಕೋಮುಗಲಭೆಯ ಕುರಿತು ವಿವಾದಾತ್ಮಕ ಟ್ವೀಟ್ ಗಳನ್ನು ಮಾಡಿದ್ದರು. ಆದರೆ ಸಚಿವರಾಗುವ ಸುದ್ದಿ ಖಾತ್ರಿಯಾಗುತ್ತಿದ್ದಂತೆ ಈ ಹಿಂದಿನ ಎಲ್ಲಾ ಟ್ವೀಟ್ ಗಳು ಡಿಲೀಟ್
ಮಾಡಿದ್ದು, ಮುಂದೆ ಯಾವುದೇ ವಿವಾದಗಳಾಗಬಾರದು ಎಂಬ ಉದ್ದೇಶದಿಂದ ಇರಬಹುದು ಎಂದು ಅಂದಾಜಿಸಲಾಗಿದೆ.