ಉಡುಪಿ, ಜು 08 (DaijiworldNews/MS): ಜಿಲ್ಲೆಯ ಇಂದ್ರಾಳಿಯ ಮೂಲದ ವಿಜಯ್ ಡಿ’ಸೋಜಾ ಕೊರೊನಾ ಸೋಂಕಿಗೆ ತುತ್ತಾಗಿ ಜು.7 ರ ಬುಧವಾರ ಕುವೈತ್ ನಲ್ಲಿ ನಿಧನರಾಗಿದ್ದಾರೆ.
40 ಹರೆಯದವರಾಗಿದ್ದ ವಿನಯ್ ದಿವಂಗತ ಆಂಟನಿ ಮತ್ತು ಲಿಜಿ ಡಿಸೋಜಾ ಅವರ ಪುತ್ರರಾಗಿದ್ದಾರೆ.ಅವರು ಕಳೆದ ಐದು ವರ್ಷಗಳಿಂದ ಕುವೈತ್ನಲ್ಲಿ ಕೆಲಸ ಮಾಡುತ್ತಿದ್ದರು.
ವಿನಯ್ ಅವರು ಮದರ್ ಆಫ್ ಸೊರೊಸ್ ಚರ್ಚ್ನ ಐಸಿವೈಎಂ ಘಟಕದಲ್ಲಿ ಸಕ್ರಿಯ ಸದಸ್ಯರಾಗಿದ್ದರು.ಮೃತರು ಪತ್ನಿ ಪ್ರಿಯಾ, ಇಬ್ಬರು ಮಕ್ಕಳು ಮತ್ತು ಅಪಾರ ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯನ್ನು ಕುವೈತ್ನಲ್ಲಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.