ಮಂಗಳೂರು, ಜು 07 (DaijiworldNews/PY): 26 ವರ್ಷದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 6ರಂದು ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಉತ್ತರಪ್ರದೇಶ ಮೂಲದ ಪ್ರೀತಿ (26) ಎಂದು ಗುರುತಿಸಲಾಗಿದೆ.
ಪ್ರೀತಿ ಅವರ ಪತಿ ವಿಮಾನಯಾನ ಸಂಸ್ಥೆಯ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಉತ್ತರ ಭಾರತದವರು ಎಂದು ಹೇಳಲಾಗಿದೆ.
ವಿವಾಹವಾದ 8 ತಿಂಗಳ ಬಳಿಕ ಪ್ರೀತಿ ತನ್ನ ಪತಿಯ ಜೊತೆ ಮಂಗಳೂರಿಗೆ ಬಂದಿದ್ದರು. ಇವರ ಪತಿ ಜುಲೈ 1ರಂದು ಕರ್ತವ್ಯಕ್ಕೆ ಸೇರಿದ್ದರು. ಪ್ರೀತಿ ತನ್ನ ಪತಿಯ ಸಹೋದರ ಹಾಗೂ ಸಹೋದರಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821