ಹೊಸದಿಲ್ಲಿ, ಅ12(SS):ರಷ್ಯಾ ಟುಡೇ ವರದಿ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಜಾಗತಿಕ ಇಂಟರ್ನೆಟ್ ಸ್ಥಗಿತ ಅಥವಾ ಏರುಪೇರಾಗುವ ಬಗ್ಗೆ ಮಾಹಿತಿ ಲಭಿಸದೆ.
ವರದಿಯಲ್ಲಿ ತಿಳಿಸಿರುವಂತೆ, ಮುಂದಿನ 48 ಗಂಟೆಗಳಲ್ಲಿ ಜಾಗತಿಕ ಇಂಟರ್ನೆಟ್ ಬಳಕೆದಾರರು ನೆಟ್ವರ್ಕ್ ಸಂಪರ್ಕ ಜಾಲ ವೈಫಲ್ಯಗಳನ್ನು ಎದುರಿಸುವ ಸಾಧ್ಯತೆಯಿದೆ. ಈ ವೇಳೆಯಲ್ಲಿ ಮುಖ್ಯ ಡೊಮೇನ್ ಸರ್ವರ್ ಹಾಗೂ ಇದಕ್ಕೆ ಸಂಬಂಧಿಸಿದ ನೆಟ್ವರ್ಕ್ ಮೂಲ ಸೌಕರ್ಯವು ಸ್ವಲ್ಪಸಮಯದ ವರೆಗೆ ಡೌನ್ ಆಗಿರಲಿದೆ.
ಮುಖ್ಯ ಡೊಮೇನ್ ಸರ್ವರ್ಗಳು ರೂಟೀನ್ ನಿರ್ವಹಣೆಗೆ ಒಳಪಡಿಸುವುದರ ಭಾಗವಾಗಿ ಇಂಟರ್ನೆಟ್ ಸಂಪರ್ಕ ಜಾಲದಲ್ಲಿ ಏರು-ಪೇರಾಗಲಿದೆ. ಇಂಟರ್ನೆಟ್ ಕಾರ್ಪೋರೇಷನ್ ಆಫ್ ಆಸೈಡ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ಐಸಿಎಎನ್ಎನ್), ನಿರ್ವಹಣೆಯನ್ನು ಹಮ್ಮಿಕೊಂಡಿದೆ.
ಸೈಬರ್ ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ, ಇದನ್ನು ಎದುರಿಸಲು ಇಂಟರ್ನೆಟ್ ನಿರ್ವಹಣೆ ಅತ್ಯಗತ್ಯವೆನಿಸಿದೆ. ಈ ಮೂಲಕ ಇಂಟರ್ನೆಟ್ನ ವಿಳಾಸ ಪುಸ್ತಕ ಆಗಿರುವ ಡೊಮೈನ್ ನೇಮ್ ಸಿಸ್ಟಂಗೆ (ಡಿಎನ್ಎಸ್) ಹೆಚ್ಚಿನ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗಿದೆ.