ಮಂಗಳೂರು,ಜು 07 (DaijiworldNews/MS): ಕೊರೊನಾ ಭಾದಿತ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಬರುವ ಮಿಸ್- ಸಿ (ಮಲ್ಟಿ ಸಿಸ್ಟಂ ಇನ್ ಪ್ಲೋ ಮ್ಯಾಟರಿ ಸಿಂಡ್ರೋಮ್ ) ಪ್ರಕರಣದ ಕಾಣಿಸಿಕೊಂಡ 16 ವರ್ಷದ ಬಾಲಕಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಕಾಣಿಸಿಕೊಂಡ ಮಿಸ್ - ಸಿ ಮೊದಲ ಪ್ರಕರಣವಿದು ಎನ್ನಲಾಗಿದೆ.
ಬಾಲಕಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಜೂ.16 ರಂದು ವೆನ್ಲಾಕ್ ಗೆ ದಾಖಲಾಗಿದ್ದಳು . ಕೋವೀಡ್ ಚಿಕಿತ್ಸೆ ನೀಡಿದ ಅನಂತರ ನ್ಯುಮೋನಿಯ , ಶಾವ್ಸಸ್ಕೋಶದ ಸಮಸ್ಯೆ , ಮೆದುಳಿನಲ್ಲಿ ಸಮಸ್ಯೆ, ಹಿಮೋಗ್ಲೋಬೀನ್ ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆ ಕಾಣಿಸಿಕೊಂಡಿತ್ತು.
ತೀವ್ರನಿಗಾ ಘಟಕದ ವೈದ್ಯರು ಚಿಕಿತ್ಸೆ 24 ದಿನಗಳ ಬಳಿಕ ಆಕೆ ಗುಣಮುಖಳಾಗಿ ಮನೆಗೆ ಹಿಂದಿರುಗಿದ್ದಾಳೆ.