ಕಾಸರಗೋಡು, ಜು.06(DaijiworldNews/HR): ಕರ್ನಾಟಕದಲ್ಲಿ ವಿವಿಧ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಜು.7ರಂದು ವಾಕ್ಸಿನೇಷನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕದ ವಿವಿಧ ಕೋರ್ಸ್ ಗಳಿಗೆ ಸಂಬಂಧಿಸಿ ಪರೀಕ್ಷೆಗೆ ಹಾಜರಾಗುವವರಿಗೆ ಲಸಿಕೆ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿ ಪರೀಕ್ಷೆಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ವಾಕ್ಸಿನ್ ನೀಡಿಕೆಗೆ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ.
ಹೊಸಂಗಡಿ ವ್ಯಾಪಾರಿ ಭವನ, ಕಾಞಂಗಾಡು ಬಲ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಗಳಲ್ಲಿ ನಾಳೆ ಜುಲೈ 7 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಲಸಿಕೆ ನೀಡಿಕೆ ಸೌಲಭ್ಯ ಏರ್ಪಡಿಸಲಾಗಿದೆ.
ಇನ್ನು ಪ್ರತಿ ಕೇಂದ್ರಗಳಲ್ಲಿ ಸ್ಪಾಟ್ ಅಡ್ಮಿಷನ್ ಲಭಿಸುವ ಮೊದಲ ತಲಾ 300 ಮಂದಿಗೆ ವಾಕ್ಸಿನ್ ಲಭಿಸಲಿದೆ. ಜಿಲ್ಲೆಗೆ ಅಗತ್ಯವಿರುವಷ್ಟು ವಾಕ್ಸಿನ್ ಲಭಿಸಿದ ತಕ್ಷಣ ಇತರ ಆರೋಗ್ಯ ಕೇಂದ್ರಗಳಲ್ಲೂ ವಾಕ್ಸಿನೇಷನ್ ಸೌಲಭ್ಯ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.