ಅ, 9: ಜಮ್ಮು ಕಾಶ್ಮೀರ ಅನಂತ್ನಾಗ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕನ್ನಡಿಗ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .ಈತ ಅಲ್ಲಿನ ಪಹಗಾಮ್ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ. ಬೆಂಗಳೂರಿನ ರಾಜಗೋಪಾಲ ನಗರದ ನಿವಾಸಿ ನರೇಂದ್ರ ಗುಂಡು ಹಾರಿಸಿಕೊಂಡ ಯೋಧ. ಇವರು ಕಳೆದ ಎರಡು ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರ್ಮಿ ಕ್ಯಾಂಪ್ ನಲ್ಲಿ ತನ್ನ ಸರ್ವೀಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ನಿನ್ನೆ ಮದ್ಯಾಹ್ನದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮ ಮೂಲದಿಂದ ತಿಳಿದು ಬಂದಿದೆ. ಯೋಧನ ಸಾವಿನ ಕುರಿತು ಸೇನೆಯ ಹಿರಿಯ ಅಧಿಕಾರಿಗಳು ಪೋಷಕರಿಗೆ ಕರೆ ಮಾಡಿ ಸಾವಿನ ಸುದ್ದಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.