ಮಂಗಳೂರು, ಜು 04 (DaijiworldNews/PY): ನಗರದ ಸ್ಟೇಟ್ ಬ್ಯಾಂಕ್ ಬಳಿ 2 ತಿಂಗಳ ಮಗುವಿನೊಂದಿಗೆ ರಸ್ತೆ ಬದಿ ಬಿದ್ದಿದ್ದ ಮಹಿಳೆ ಹಾಗೂ ಅವಳ ಜೊತೆಯಿದ್ದ ಮಗುವನ್ನು ಚೈಲ್ಡ್ಲೈನ್(1098), ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಯೋಗದೊಂದಿಗೆ ರಕ್ಷಿಸಲಾಗಿದೆ.
ಸಾಂದರ್ಭಿಕ ಚಿತ್ರ
ಮಕ್ಕಳ ಕಲ್ಯಾಣ ಸಮಿತಿಯ ಸಹಯೋಗದಲ್ಲಿ ಸ್ವಾಧಾರ ಕೇಂದ್ರದಲ್ಲಿ ಪುನರ್ವಸತಿಯನ್ನು ನೀಡಲಾಗಿದೆ.
ಚೈಲ್ಡ್ ಲೈನ್ (1098) ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ತಂಡದ ಸದಸ್ಯೆ ಅಸುಂತಾ ಹಾಗೂ ಕವನ್ ಕಬಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಮಾ ಹಾಗೂ ಬಂದರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.