ಮಂಗಳೂರು, ಜು 02 (DaijiworldNews/MS): ವಾಟ್ಸಪ್ ಖಾತೆ ಹ್ಯಾಕ್ ಮಾಡಿ ಕರೆ ಮಾಡಿ ಬ್ಯಾಂಕ್ ಖಾತೆಯಿಂದ 1ಲಕ್ಷ ರೂ. ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಸ್ನೇಹಿತರೊಬ್ಬರು ಯುಎಸ್ ಎ ಯಲ್ಲಿ ವಾಸ್ತವ್ಯವಿದ್ದು, ಜೂನ್ 29ರಂದು ಅವರ ವಾಟ್ಸಪ್ ಮೂಲಕ ಕರೆ ಮಾಡಿ ಸಂಬಂಧಿಕರಿಗೆ ಕೊರೊನಾ ಬಂದಿದ್ದು ಚಿಕಿತ್ಸೆಗಾಗಿ ಹಣವನ್ನು ಕಳಿಸಿಕೊಡುವಂತೆ ಕೇಳಿದ್ದು ಇದನ್ನು ನಂಬಿ ಆತ ನೀಡಿದ ನಂಬರ್ ಗೆ ಗೂಗಲ್ ಪೇ ಮೂಲಕ ಹಂತಹಂತವಾಗಿ 1ಲಕ್ಷ ವರ್ಗಾವಣೆ ಮಾಡಿದ್ದಾರೆ.
ಬಳಿಕ ಸ್ನೇಹಿತನಿಗೆ ಕರೆ ಮಾಡಿ ಕೇಳಿದಾಗ ವಾಟ್ಸಪ್ ಹ್ಯಾಕ್ ಆಗಿರುವುದು ತಿಳಿಸಿದ್ದಾರೆ.ಆಗ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.