ಹೆಬ್ರಿ, ಅ 10 (MSP): ಹೆಬ್ರಿ ಸಮೀಪ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಶಿಕಾರಿ ಮಾಡುತ್ತಿದ್ದ ಐದು ಜನರ ತಂಡದ ಪೈಕಿ ಇಬ್ಬರು ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೇರಳದ ಪಾತೂರು ನಿವಾಸಿ ಅಝೀಝ್, ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಶಾಹುಲ್ ಹಮೀದ್ ಸಿಕ್ಕಿಬಿದ್ದವರು. ಶಿಕಾರಿಗೆ ಬಳಸುತ್ತಿದ್ದ ಕೋವಿ ಸಹಿತ ಇವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಣಿ ಬೇಟೆಯ ತಂಡದಲ್ಲಿ ಐವರು ಇದ್ದು ಮೂವರು ಪರಾರಿಯಾಗಿದ್ದಾರೆ.ಆರೋಪಿಗಳು ಕಬ್ಬಿನಾಲೆ ಅಭಯಾರಣ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಬರಿಂಕವನ್ನು ಬೇಟೆಯಾಡಿದ್ದರೆನ್ನಲಾಗಿದೆ. ಈ ವೇಳೆ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ತಂಡದಲ್ಲಿದ್ದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ತಲ್ವಾರ್ ಹಮೀದ್ ಹಾಗೂ ಮತ್ತಿಬ್ಬರು ಪರಾರಿಯಾಗಿದ್ದಾರೆ.
ಆರೋಪಿಗಳಿಂದ ಬೇಟೆಯಾಡಿದ ಬರಿಂಕ ಹಾಗೂ ಬೇಟೆಗೆ ಬಳಸಿದ ಕೋವಿ, ಚೂರಿಗಳು ಹಾಗೂ ಕಾರೊಂದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ