ಮಂಗಳೂರು, ಜೂ 28 (DaijiworldNews/MS): ನಗರದ ಲಾಡ್ಜ್ ನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಯುವಕ ಜೊತೆಯಾಗಿ ಇರುವುದನ್ನು ಭಾನುವಾರ ಪತ್ತೆಯಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿನಿ ತರೀಕೆರೆಯವಳಾಗಿದ್ದು, ಯುವಕ ಮಂಗಳೂರಿನವನು ಎಂದು ತಿಳಿದುಬಂದಿದೆ.
ವಾರಾಂತ್ಯ ಕರ್ಪ್ಯೂ ಇದ್ದರೂ ಯುವಕ ಕಾರಿಗೆ ಯಾವುದೇ ಸ್ಟಿಕರ್ ಅಂಟಿಸಿ ಪೊಲೀಸರ ಕಣ್ತಪ್ಪಿಸಿ ಯುವತಿಯನ್ನು ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಸಂಘಟನೆಯೊಂದರ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ