ಬೆಳ್ತಂಗಡಿ, ಅ 09(MSP): ಕಕ್ಕಿಂಜೆಯಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂಗೆ ನುಗ್ಗಿ ಕಳವಿಗೆ ಯತ್ನಿಸಿದ್ದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಆರೋಪಿ ಉಜಿರೆ ಕಕ್ಕೆಜಾಲು ನಿವಾಸಿ ಮೊಹಮ್ಮದ್ ಆಸಿಫ್ನನ್ನು ಅ.೦೮ರ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಸಿಸಿ ಟಿವಿ ಫುಟೇಜ್ ಆಧಾರದಲ್ಲಿ ಧರ್ಮಸ್ಥಳ ಪಿಎಸ್ಐ ಅವಿನಾಶ್ ಹಾಗೂ ಸಿಬ್ಬಂದಿದಿ ಕಕ್ಕಿಂಜೆಯಲ್ಲಿ ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈತ ಅ.05 ರ ತಡರಾತ್ರಿ ಎಟಿಎಂಗೆ ನುಗ್ಗಿ ಅಲ್ಲಿನ ಸೊತ್ತುಗಳಿಗೆ ಹಾನಿ ಮಾಡಿ ಕಳವಿಗೆ ಯತ್ನಿಸಿದ್ದ. ಆತನಿಗೆ ಇದೀಗ ನ್ಯಾಯಾಂಗ ಬಂಧನ ವಿಧಿಸಿದೆ.