ಪುತ್ತೂರು, ಅ 8 : ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ಅವರೊಂದಿಗೆ ಪರಿಚಯಸ್ಥರಂತೆ ನಂಬಿಕೆ ಹುಟ್ಟಿಸುವ ರೀತಿಯಲ್ಲಿ ನಟಿಸಿ ಅವರಿಂದ ಬೆಲೆ ಬಾಳುವ ಸೊತ್ತುಗಳನ್ನು ವಂಚಿಸಿದ ದೋಚುತ್ತಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಕನ್ಯಾನ ಮರಾಠಿ ಮೂಲೆ ನಿವಾಸಿ ಸುರೇಶ್ ನಾಯ್ಕ(41), ಈತ ಕಳೆದ ಕೆಲವು ತಿಂಗಳ ಹಿಂದೆ ಪುತ್ತೂರಿನ ಬಸ್ನಿಲ್ದಾಣದಲ್ಲಿ, ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ವೃದ್ದರನ್ನು ತನ್ನ ಮಾತಿನ ಬಲೆಗೆ ಸಿಕ್ಕಿಸಿ ನಂಬಿಸಿ ಅವರಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನು ವಂಚಿಸಿ ದೋಚುತ್ತಿದ್ದ. ಎಸ್ಪಿ ಸುಧೀರ್ ಕುಮಾರ್ ಮತ್ತು ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ರವರ ಮಾರ್ಗದರ್ಶನದಂತೆ ಕ್ರೈಂ ಎಸ್.ಐ ವೆಂಕಟೇಶ್ ಭಟ್ರವರ ನೇತೃತ್ವದಲ್ಲಿ ಪ್ರೊಬೇಷನರಿ ಎಸ್.ಐ ರವಿ, ಎ.ಎಸ್.ಐ ಚಿದಾನಂದ್, ಹೆಡ್ಕಾನ್ಸ್ಟೇಬಲ್ಗಳಾದ ಸ್ಕರಿಯ, ಪ್ರಸನ್ನ, ಮಂಜುನಾಥ, ಪ್ರಶಾಂತ್ ರೈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.