ಉಳ್ಳಾಲ, ಜೂ 22 (DaijiworldNews/MS): ತೊಕ್ಕೊಟ್ಟು ಸಮೀಪದ ಒಳಪೇಟೆ ಬಳಿ 2021 ರ ಜೂನ್ 19 ರಂದು ನಡೆದ ಜಯರಾಜ್ ಅವರ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಯನ್ನು ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಉಬೇದುಲ್ಲ (27) ಎಂದು ಗುರುತಿಸಲಾಗಿದೆ. ಈತ 120 ಗ್ರಾಂ ಚಿನ್ನದ ಆಭರಣಗಳು ಮತ್ತು 3 ಮೊಬೈಲ್ಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿತ್ತು
ಬಂಧಿತನಿಂದ 95 ಗ್ರಾಂ ಕಳವಾದ ಚಿನ್ನಾಭರಣ, 2 ಮೊಬೈಲ್, ಒಂದು ಬೈಕು, ಮತ್ತು ಆಟೋರಿಕ್ಷಾವನ್ನು ವಶಪಡಿಕೊಳ್ಳಲಾಗಿದೆ.