ಮಂಗಳೂರು, ಜೂ22 (DaijiworldNews/MS): ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗೆ ಐದು ಜನರನ್ನು ಬಂಧಿಸಿದ್ದು ಇದರ ಮುಂದುವರಿದ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನೈಜೀರಿಯಾದ ಸ್ಟ್ಯಾನ್ಲಿ ಚಿಮಾ ಮತ್ತು ಉಪ್ಪಳದ ರಮೀಜ್ ಎಂದು ಗುರುತಿಸಲಾಗಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಗಾಗಲೇ 170 ಗ್ರಾಂ ಮತ್ತು 65 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಎರಡು ಪ್ರಕರಣಗಳಲ್ಲಿ, ಒಂಬತ್ತು ಮೊಬೈಲ್ ಫೋನ್, 24.82 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.