ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸುವಂತಿಲ್ಲ , ಕೂದಲನ್ನು ಕತ್ತರಿಸುವಂತಿಲ್ಲ, ಮೇಕಪ್ ಅಂತು ಮಾಡಲೇ ಬಾರದು ಎಂದು ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.ಆದರೆ ದರುಲ್ ಉಲೂಮ್ ದಿಯೋಬಂದ್ ಉನ್ನತ ಶಿಕ್ಷಣ ಸಂಸ್ಥೆಯ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಫತ್ವಾವನ್ನು ಟೀಕಿಸಿದೆ. ಸಹರಣ್ಪುರದ ಮುಸ್ಲಿಂ ವ್ಯಕ್ತಿಯೊಬ್ಬ 'ನನ್ನ ಪತ್ನಿ, ಐಬ್ರೊ , ಹೇರ್ ಕಟ್ ಮಾಡಬಹುದೇ ? ಈ ಬಗ್ಗೆ ಇಸ್ಲಾಂ ಕಾನೂನು ಏನು ಹೇಳುತ್ತದೆ' ಎಂದು ದಾರುಲ್ ಇಫ್ತಾ ವನ್ನು ಪ್ರಶ್ನಿಸಿದ್ದ. ಅದಕ್ಕೆ ಉತ್ತರಿಸಿದ ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷಿದ್ದ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ. ದೇಶಾದ್ಯಂತ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೆಚ್ಚಾಗಿ ಹೋಗುತ್ತಿದ್ದಾರೆ. ಆದರೆ ಮುಸ್ಲಿಂ ಮಹಿಳೆಯರು ಮೇಕಪ್ ಮಾಡಿಕೊಂಡು ಇತರ ಪುರುಷರನ್ನು ಆಕರ್ಷಿಸುವುದಕ್ಕೆ ಅವಕಾಶ ನೀಡಬಾರದು' ಎಂದು ಅಭಿಪ್ರಾಯ ವ್ಯಕ್ತಪಡಿಸಿ ಫತ್ವಾ ಹೊರಡಿಸಿದೆ.
ಆದರೆ ಇದಕ್ಕೆ ತ್ರಿವಳಿ ತಲಾಕ್ ಸಂತ್ರಸ್ತೆ ಸೋಫಿಯಾ ಅಹ್ಮದ್ ಕಿಡಿಕಾರಿ, ವಿಶ್ವವೇ ಬದಲಾಗುತ್ತಿದ್ದು, ಸೌದಿ ಅರೇಬಿಯಾ ದಲ್ಲೂ ಮಹಿಳೆಯರಿಗೆ ಡ್ರೈವಿಂಗ್ಗೆ ಅವಕಾಶ ನೀಡಲಾಗಿದೆ. ಈ ವೇಳೆಯಲ್ಲಿ ಫತ್ವಾ ಹೊರಡಿಸಿರುವುದು ಮುಸ್ಲಿಂ ಮತಪಂಡಿತರು ಮತ್ತು ಮೌಲ್ವಿಗಳಿಗೆ ಅವಮಾನ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.