ಕಾಸರಗೋಡು, ಜೂ 21 (DaijiworldNews/PY): ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಬಂದಡ್ಕ ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಡಿಚ್ಚಾಲ್ನ ಉಮ್ಮರ್ ಫಾರೂಕ್ (25) ಹಾಗೂ ಪೆರಿಯ ನವೋದಯ ನಗರದ ಬಿ. ಹೆಚ್ ಅಬ್ದುಲ್ ಅಝೀಜ್ (35) ಬಂಧಿತರು.
ಕಾರಿನಲ್ಲಿ ಮಾದಕ ವಸ್ತುವನ್ನು ಸಾಗಾಟ ಮಾಡಲಾಗುತ್ತಿತ್ತು. ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.