ಕಾರವಾರ, ಅ 07(SM): ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಆರೋಪಿಯೋರ್ವನನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ. ಭಟ್ಕಳದ ಮೂಸಾನಗರದ ನಿವಾಸಿ ಮಹಮ್ಮದ ಮಾರುಫನನ್ನು ಕಾರವಾರದ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಬಿಡುಗಡೆ ಮಾಡಿದೆ.
1984ರ ಮೇ 11ರಂದು ಅಂದರೆ ಸುಮಾರು 34 ವರ್ಷದ ಹಿಂದೆ ನಡೆದ ಅಪರಾಧ ಕೃತ್ಯವಾಗಿದೆ. ಕೃತ್ಯದ ಬಳಿಕ ಆರೋಪಿಯು ಕೊಲ್ಲಿ ರಾಷ್ಟಕ್ಕೆ ಪರಾರಿಯಾಗಿದ್ದನು. ನಂತರ ಆತ ಮದುವೆ ಕೂಡ ಆಗಿದ್ದ ಎನ್ನಲಾಗಿದೆ. ಈ ವರ್ಷ ಭಟ್ಕಳಕ್ಕೆ ಬಂದಾಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆತ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದ. ಆದರೆ, ನ್ಯಾಯಾಲಯವು ಅದನ್ನು ತಿರಸ್ಕರಿಸಿತ್ತು.
ಇದೀಗ ಪ್ರಕರಣದ ಸಾಕ್ಷ್ಯದಾರಗಳ ಅಲಭ್ಯತೆಯ ಹಿನ್ನೆಲೆ ಪ್ರದಾನ ಸತ್ರ ನ್ಯಾಯಧೀಶರಾದ ಟಿ.ಜೆ. ಶಿವಶಂಕರೇಗೌಡ ಪ್ರಕರಣದ ಸಾಕ್ಷಿದಾರಾರ ವಿಚಾರಣೆ ಮಾಡದೆ ಆರೋಪಿಯನ್ನು ದೋಷ ಮುಕ್ತ ಮಾಡಿದ್ದಾರೆ.
ಆರೋಪಿ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ವಾದಿಸಿದ್ದರು.