ಮಂಗಳೂರು/ಉಡುಪಿ, ಜೂ 21 (DaijiworldNews/MS): ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೂನ್ 21ರಂದು ಕೋವಿಡ್-19 ಲಸಿಕಾ ಮೇಳವನ್ನು ಆಯೋಜನೆ ಮಾಡಿದೆ. ಇದರ ಅಂಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಆದ್ಯತೆಯ 18 ರಿಂದ 44 ವಯೋಮಾನದ ಸರ್ಕಾರ ಗುರುತಿಸಿರುವ ಅದ್ಯತಾ ಗುಂಪಿನ ಫಲಾನುಭವಿಗಳಿಗೆ ಮತ್ತು ಕೊರೊನಾ ಮುಂಚೂಣಿಯಲ್ಲಿರು ಕಾರ್ಯಕರ್ತರಿಗೆ ನೀಡಲಾಗುವುದು.
ಮಂಗಳೂರು ತಾಲೂಕಿನ ಎಲ್ಲ 10 ನಗರ ಆರೋಗ್ಯ ಕೇಂದ್ರಗಳಲ್ಲಿ , ಬಂಟ್ವಾಳ , ಪುತ್ತೂರು, ನಗರದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡು ಅಪಾಂಟ್ ಮೆಂಟ್ ಮಾತ್ರ ಲಸಿಕೆ ಶಿಬಿರಕ್ಕೆ ಹಾಜರಾಗಬೇಕು .
ರಾಜ್ಯಾದ್ಯಂತ ಒಂದೇ ದಿನದಲ್ಲಿ 5 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.