ಮಂಗಳೂರು : ಮಾರ್ನೆಮಿ ಮುಗಿದರೂ ಅದರ ಹ್ಯಾಂಗೋವರ್ ನಿಂದ ಕರಾವಳಿ ಜನ ಸಂಪೂರ್ಣವಾಗಿ ಇನ್ನೂ ಹೊರಬಂದಿಲ್ಲ..ಈ ನಡುವೆ ಕೆಂಪು ಸೀರೆಯುಟ್ಟ ವಿದೇಶಿ ಬೆಡಗಿ ನವರಾತ್ರಿ ವೇಳೆ ಕರಾವಳಿಯ ಹುಲಿಗಳ ಜತೆ ಹೆಜ್ಜೆ ಹಾಕಿದ್ದ ವಿಡಿಯೋ ಕರಾವಳಿ ತುಂಬಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಹುಡುಗಿಯ ವಿಡಿಯೋ ನೋಡಿ ಖುಶಿಪಟ್ಟವರಿಗೆ ಇನ್ನು ಹೆಚ್ಚಿನ ಡಿಟೇಲ್ಸ್ ಇಲ್ಲಿದೆ ನೋಡಿ..
ಮಂಗಳೂರಿನ ನೀರು ದೋಸೆ ಇಷ್ಟ ಅನ್ನೋ ಈ ಹುಡುಗಿ ಹೆಸರು ನೊಯಮಿ.. ಮೂಲತಃ ಫ್ರಾನ್ಸ್ ದೇಶದ ಪ್ರಜೆ.ವಲ್ಡ್ ಟೂರ್ ಮಾಡೋದಂದ್ರೆ ಈಕೆಗೆ ಭಯಂಕರ ಆಸಕ್ತಿ. ಸ್ನೇಹಿತೆಯ ಆಹ್ವಾನದ ಮೇರೆಗೆ ದಸರಾಕ್ಕಾಗಿಯೇ ಮಂಗಳೂರಿಗೆ ಬಂದಾಗ, ವೆಂಕಟರಮಣ ದೇವಾಲಯದಲ್ಲಿ ತಾಸೆಯ ಪೆಟ್ಟಿಗೆ ಹುಲಿವೇಷಧಾರಿಗಳ ಜತೆಗೆ ಹೆಜ್ಜೆ ಹಾಕಿದ್ರು..ಅಮೇಲೆ ತಾಸೆ ಪೆಟ್ಟಿಗೆ ಕುಣಿದ ವಿಡಿಯೋ ಊರುತುಂಬಾ ವೈರಲ್ ಆಗಿತ್ತು.