ವಿಟ್ಲ, ಜೂ. 19 (DaijiworldNews/HR): ವಿಟ್ಲದಲ್ಲಿ ಕೊರೊನಾ ಸೋಂಖು ಹೆಚ್ಚಾಗಿ ಹರಡುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ನಿರ್ಣಯದಂತೆ ಶನಿವಾರ ಮತ್ತು ಭಾನುವಾರ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಿದ್ದು, ಶನಿವಾರ ವಿಟ್ಲ ಪೇಟೆ ಸಂಪೂರ್ಣವಾಗಿ ಸ್ತಬ್ಧ ಗೊಂಡಿದೆ.
ವಾರಾಂತ್ಯ ಕರ್ಫ್ಯೂ ವೇಳೆ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಮಾಡುವಂತೆ ಸೂಚಿಸಲಾಗಿದ್ದು, ಅದರಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ. ಜನರು ಪೇಟೆಗೆ ಕಾಲಿಟ್ಟಿಲ್ಲ. ತುರ್ತು ಅವಶ್ಯಕತೆ ತೆರಳುವರಿಗೆ ವಿನಾಯಿತಿ ನೀಡಲಾಗಿದೆ.
ಇನ್ನು ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಹಾಲಿನ ಅಂಗಡಿ ತೆರೆದಿದ್ದು, ಔಷಧಿ ಅಂಗಡಿ ಮಾತ್ರಗಳು ಎಂದಿನಂತೆ ಕಾರ್ಯಾಚರಿಸಿದೆ.
ವಿಟ್ಲದ ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದ್ದು, ಸರಿಯಾದ ಕಾರಣ ನೀಡಿದವರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ.