ಕಾಸರಗೋಡು, ಜೂ 19(DaijiworldNews/MS): ಕೆರೆಗೆ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಮೇಲ್ಪರಂಬದ ವೆಳ್ಳಿಯಾಡ್ ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ನೆಲ್ಲಿಕಟ್ಟೆಯ ಮುಹಮ್ಮದ್ ಕೈಫ್ (18) ಮೃತಪಟ್ಟವರು.
ಟೈಲ್ಸ್ ಕಾರ್ಮಿನಾಗಿದ್ದ ಕೈಫ್ ಉದುಮದಲ್ಲಿ ಕೆಲಸ ಮುಗಿಸಿ ಸಂಜೆ ಮೇಲ್ಪರಂಬದ ಸಂಬಂಧಿಕರ ಮನೆಗೆ ಬಂದಿದ್ದು , ಈ ಸಂದರ್ಭದಲ್ಲಿ ಮನೆ ಸಮೀಪದ ಕೆರೆಗೆ ಹೋದಾಗ ಘಟನೆ ನಡೆದಿದೆ. ಜೊತೆಗಿದ್ದವರು ಕೈಫ್ ನನ್ನು ಮೇಲಕ್ಕೆತ್ತಿ ದೇ ಳಿ ಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ . ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ