ಉಳ್ಳಾಲ, ಅ06(SS): ಉಳ್ಳಾಲದಲ್ಲಿರುವ ಸೋಮೇಶ್ವರ ಸಮುದ್ರಕ್ಕೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ತೊಕ್ಕೊಟ್ಟು ಮೇಲ್ಸೇತುವೆ ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ.
ರಾಜೇಶ್ ಅನೇಕ ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ತಿಳಿದುಬಂದಿದೆ. ಶುಕ್ರವಾರ ಈ ಘಟನೆ ನಡೆದಿದ್ದು ಮೃತ ದೇಹ ಸಂಜೆ ವೇಳೆ ಸೋಮೇಶ್ವರ ಸಮುದ್ರ ಕಿನಾರೆಯ ರುದ್ರಪಾದೆಯ ಬಳಿ ಪತ್ತೆಯಾಗಿದೆ. ಸಮುದ್ರ ತೀರದಲ್ಲಿ ತೇಲಿ ಬಂದ ಮೃತದೇಹವನ್ನು ಬೀಚ್ ಲೈಫ್ ಗಾರ್ಡ್ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.