ಬೆಳ್ತಂಗಡಿ, ಅ05(SS): ಬೆಳ್ತಂಗಡಿಯ ಯುವಕನೊಬ್ಬ ತಾನೇ ದುಡಿದು ಕೂಡಿಟ್ಟ ಸ್ವಂತ ಹಣದಿಂದ ಊರಿಗೆ ತೂಗು ಸೇತುವೆ ಕಟ್ಟಿ ಮಾದರಿ ಕೆಲಸ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಗ್ರಾಮವಾದ ಪೊಲಿಪು ನಿವಾಸಿ ಬಾಲಕೃಷ್ಣ ತೂಗು ಸೇತುವೆ ನಿರ್ಮಿಸಿ ಎಲ್ಲರಿಂದ ಭೇಷ್ ಅನಿಸಿಕೊಂಡ ಯುವಕ.
ಬೆಳ್ತಂಗಡಿ ತಾಲೂಕಿನ ಕುಗ್ರಾಮವಾದ ಪೊಲಿಪುವಿನಿಂದ ಶಿಶಿಲ ಎಂಬ ಪುಟ್ಟ ಪೇಟೆಯನ್ನು ಸೇರಬೇಕಾದರೆ ಹೊಳೆಯೊಂದನ್ನು ದಾಟಬೇಕು. ಸೇತುವೆಗಾಗಿ ಪೊಲಿಪು ಗ್ರಾಮದ ಜನ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರ ಕುಗ್ರಾಮದ ಜನರ ನೋವಿನ ಜೊತೆ ಸ್ಪಂದಿಸಿರಲಿಲ್ಲ. ಹೀಗಾಗಿ ಪೊಲಿಪು ನಿವಾಸಿ ಬಾಲಕೃಷ್ಣ ತಾನೇ ದುಡಿದ ಸ್ವಂತ ಹಣದಿಂದ ಊರಿಗೆ ತೂಗು ಸೇತುವೆ ಕಟ್ಟಿಜನರ ನೋವಿಗೆ ಪರಿಹಾರ ಸೂಚಿಸಿದ್ದಾರೆ.
ಇದೀಗ ಬಾಲಕೃಷ್ಣ ಅವರ ಮಾದರಿ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.