ನಮ್ಮ ತುಳು ಸಿನಿಮಾ ಇಂಡಸ್ಟ್ರಿ ಯಲ್ಲೂ ಸ್ಯಾಂಡಲ್ ವುಡ್ ಆಕ್ಷನ್ ಕ್ವೀನ್ ಮಾಲಾಶ್ರೀಯಂತ ನಟಿಯೊಬ್ಬಳು ಹುಟ್ಟಿಕೊಳ್ಳುತ್ತಿದ್ದಾಳೆ. ಹೀಗಾಗಿ ತುಳು ಭಾಷೆಯಲ್ಲಿ ಇನ್ನು ಖಡಕ್ ಡೈಲಾಗ್ ಗಳನ್ನು ನಾಯಕಿಯ ಬಾಯಿಯಿಂದ ಕೇಳೋ ದಿನ ದೂರವಿಲ್ಲ. ಸಿ-ಟೌನ್ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ವಿಭಿನ್ನ ನೆಲೆಯಲ್ಲಿ ತೆರೆದುಕೊಳ್ಳುತ್ತಿದೆ. ಕಾಮಿಡಿ ಪ್ರಧಾನವಾದ ಕೋಸ್ಟಲ್ ವುಡ್ ನಲ್ಲಿ ಜಬರ್ ದಸ್ತ್ ಆಕ್ಷನ್ ಹೊಂದಿರೋ ಸಿನಿಮಾ ಒಂದು ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ, ಚಿತ್ರದ ಹೆಸರು ’ಅಪಿನಾ ಮಾತಾ ಎಡ್ಡೆಗೆ’. ಜೈ ತುಳುನಾಡ್ ಖ್ಯಾತಿಯ ಪ್ರವೀಣ್ ಈ ಚಿತ್ರವನ್ನು ನಿರ್ದೇಸುತ್ತಿದ್ದು , ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಮಿಂಚಲಿದ್ದಾರೆ ಪವಿತ್ರ ಖ್ಯಾತಿಯ ಚಿರಶ್ರೀ ಅಂಚನ್.
ಹೌದು "ಆಪಿನ ಮಾತಾ ಎಡ್ಡೆಗೆ" ಸಿನಿಮಾ ಪಕ್ಕ , ಆಕ್ಷನ್, ಥ್ರಿಲಿಂಗ್ ಹಾಗೂ ಕಾಮಿಡಿಗಳ ಸಮ್ಮಿಶ್ರಣವಿರುವ ಸಿನಿಮಾ. ತುಳುವಿನಲ್ಲಿ ಮೊದಲ ಬಾರಿ ನಾಯಕಿ ಪ್ರಧಾನ ಕಥೆಯುಳ್ಳ ಮತ್ತು ಪೊಲೀಸ್ ಸ್ಟೋರಿಯನ್ನು ಒಳಗೊಂಡ ಸಿನಿಮಾ ಇದಾಗಲಿದೆ ಎನ್ನೋದು ನಿರ್ದೇಶಕರ ಅಂಬೋಣ.
ಚಿತ್ರತಂಡ ಈಗಾಗಲೇ ಮೊದಲ ಶೆಡ್ಯೂಲ್ ನ ೧೦ ದಿನಗಳ ಚಿತ್ರೀಕರಣವನ್ನು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮುಗಿಸಿದೆ. ಚಿತ್ರಕ್ಕೆ ನಿರ್ಮಾಪಕರು ಪ್ರವೀಣ್ ಮತ್ತು ಸಹ ನಿರ್ಮಾಪಕರು ಸೋಲೇಮಾನ್ ಕೆ ಜಾರ್ಜ್ ಆಗಿದ್ದಾರೆ. ಕಿಂಗ್ ಪಿಚ್ಚರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಸಿನಿಮಾ ಪಕ್ಕಾ ಪೊಲೀಸ್ ಒರಿಯೆಂಟೆಡ್ ಆಗಿದ್ದು ನಾಯಕಿ ಚಿರಶ್ರೀಗೆ ಜತೆಯಾಗಲಿದ್ದಾರೆ ವಿಜೆ ವಿನೀತ್. ಇನ್ನು ಉಳಿದಂತೆ ಸಹ ಕಲಾವಿದರಾಗಿ ಅರವಿಂದ್ ಬೋಲಾರ್, ಉಗ್ರಂ ರವಿ , ಭವ್ಯಾ, ಸ್ವಸ್ತಿಕ್ ಶಂಕರ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಜೀವನದಲ್ಲಿ ನಡೆಯುವ ಕಹಿ ಘಟನೆಗಳನ್ನು ಪಾಸಿಟಿವ್ ಆಗಿ ಪರಿವರ್ತಿಸಿಕೊಳ್ಳಬೇಕು ಎನ್ನುವ ಥೀಮ್ ಇಟ್ಟಿಕೊಂಡು "ಆಪಿನ ಮಾತಾ ಎಡ್ಡಗೆ’ ಚಿತ್ರ ನಿರ್ಮಾಣವಾಗುತ್ತಿದೆ.